Posts

ಕೈ ತುತ್ತು ಕಾರ್ಯಕ್ರಮ

ಕಡೇ ಕಾರ್ತೀಕ ಸೋಮವಾರ, ಅಂದರೆ ನವೆಂಬರ್ 21, 2022ರಂದು ನಮ್ಮ ಸ್ನೇಹಾ ಸೇವಾ ಸಂಸ್ಥೆಯು ಆಯೋಜಿಸಿದ ದೀಪೋತ್ಸವ ಮತ್ತು ಕೈ ತುತ್ತು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ದೊರಕಿತ್ತು. ಸುಮಾರು ನೂರೈವತ್ತು ಮಕ್ಕಳುಗಳಿಗೆ, ಮುವತೈದು ಮಹಿಳೆಯರು ಕೈ ತುತ್ತು ಹಾಕಿದರು. ನಾವು ಚಿಕ್ಕವರಾಗಿದ್ದಾಗ ನಮ್ಮ ಮನೆಯಲ್ಲಿ ತಿಂಗಳಲ್ಲಿ ಒಂದು ದಿನವಾದರೂ ಎಲ್ಲಾ cousins (ಸುಮಾರು 8 - 10 ಮಂದಿ) ನಮ್ಮ ಅಜ್ಜಿಯ ಸುತ್ತ ಕುಳಿತು ಕಥೆಯನ್ನು ಕೇಳುತ್ತಾ ಕೈ ತುತ್ತು ಹಾಕಿಸಿಕೊಂಡು ಸ್ವಲ್ಪ ಜಾಸ್ತಿನೇ ತಿನ್ನುತ್ತಿದ್ದೆವು. ಅದೇನೋ ಕೈ ತುತ್ತು ಬಹಳ ರುಚಿಯಾಗಿ ಇರುತ್ತಿತ್ತು. ಕೆಲವೊಮ್ಮೆ ಎರಡನೇ ಸಲ ಕಲಸಿಕೊಂಡು ಬರುವ ಸಾಧ್ಯತೆಯೂ ಇತ್ತು. ಕಡೆಯ ತುತ್ತಿಗೆ ನಾವೆಲ್ಲರೂ ನನಗೇ ನನಗೇ ಅಂತ ಪೈಪೋಟಿ ನಡೆಯುತ್ತಿತ್ತು.. ಯಾಕೆಂದರೆ 'ಬಳಕು ಬೆಣ್ಣೆ ತಿಂದವರಿಗೆ ಭಾಗ್ಯ' ಎಂದು ಹೇಳುತ್ತಾರೆ. ಈಗ ಕೈ ತುತ್ತು ಒಂದು 'ಕಾರ್ಯಕ್ರಮ' ಆಗಿರುವುದು ಒಂದು ವಿಪರ್ಯಾಸ. ಈಗಿನ ದಿನಗಳಲ್ಲಿ ಚಾಪೆ ಹಾಸಿ ತಟ್ಟೆಯನ್ನು ನೆಲದ ಮೇಲೆ ಇಟ್ಟು ಚಕ್ಕಮಕ್ಕಳ ಹಾಕಿಕೊಂಡು ಊಟ ಮಾಡುವ ಮನೆಗಳು/ಜನರು ಬಹಳ ಕಡಿಮೆ. Dinning table ನಲ್ಲಿ ಕುಳಿತು ಊಟ ಮಾಡುವ ಜನರೂ ಬೆರಳೆಣಕೆಯಷ್ಟು. ಕೆಲವು ಮನೆಗಳಲ್ಲಿ dinning table, dumping table ಆಗಿವೆ. ಈಗಿನ ಪೀಳಿಗೆ TV ನೋಡುತ್ತ, ಮೊಬೈಲ್ ನೋಡುತ್ತ, ತಟ್ಟೆ ಯನ್ನು ಕೈ ಯಲ್ಲಿ ಇಟ್ಟುಕೊಂಡು ಊಟ ಮಾಡುವ ಸ್ಥಿತಿ ಬಂದಿ...

Trial

 ನಾನು ಈ ಶುಭ ದಿನ ಅಂದರೆ ಗುರುವಾರ, ನವೆಂಬರ್ 24ನೆ ತಾರೀಖು ಕನ್ನಡದಲ್ಲಿ 'Blog' ಬರೆಯಲು ಶುರು ಮಾಡಿರುವೆ. ದಯಮಾಡಿ ಓದಿ ನಿಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ತಿಳಿಸಿ... ಇಂತಿ ನಿಮ್ಮ ಶ್ಯಾಮಲ